ಡಿಸೆಂಬರ್ ೨೫ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೫೯ನೇ ದಿನ( ಅಧಿಕ ವರ್ಷದಲ್ಲಿ ೩೬೦ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೫ನೇ ದಿನ. ಈ ದಿನದ ನಂತರ ೬ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೮೦೦ - ಚಾರ್ಲ್‍ಮೇನನನ್ನು ಪೋಪ್ ಮೂರನೇ ಲಿಯೊ ಪವಿತ್ರ ರೋಮ್‍ನ ಚಕ್ರವರ್ತಿಯನ್ನಾಗಿ ರೋಮ್ ನಗರದಲ್ಲಿ ಕಿರೀಟಧಾರಣೆ ಮಾಡಿದ. ೧೭೭೯ - ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆಯು ಬ್ರಿಟನ್ನ ಸೇನೆಯ ಮೇಲೆ ಆಕ್ರಮಿಸಲು ಡೆಲಾವೇರ್ ನದಿಯನ್ನು ದಾಟಿತು. ೧೯೯೧ - ಮಿಕೈಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದನು. == ಜನನ == ೧೬೪೨ - ಆಯ್‌ಜ಼ಕ್ ನ್ಯೂಟನ್, ಇಂಗ್ಲೆಂಡ್‌ನ ಖ್ಯಾತ ಭೌತವಿಜ್ಞಾನಿ ೧೭೬೩ - ಕ್ಲಾಡ್ ಶಾಪ್, ಫ಼್ರಾನ್ಸ್‌ನ ಟೆಲಿಗ್ರಾಫ಼್ ಸಂಶೋಧಕ ೧೮೬೧ - ಪಂಡಿತ್ ಮದನ್ ಮೋಹನ್ ಮಾಲವೀಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ. ೧೮೭೬ - ಮೊಹಮ್ಮದ್ ಆಲಿ ಜಿನ್ನ, ಪಾಕಿಸ್ತಾನದ ಸ್ಥಾಪಕ. ೧೯೧೯ - ನೌಶಾದ್, ಹಿಂದಿ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕ ೧೯೨೪ - ಅಟಲ್ ಬಿಹಾರೀ ವಾಜಪೇಯೀ, ಭಾರತದ ೧೩ನೇ ಪ್ರಧಾನ ಮಂತ್ರಿ ೧೯೨೫ - ಸತೀಶ್ ಗುಜ್ರಾಲ್, ವರ್ಣಚಿತ್ರಕಾರ, ಶಿಲ್ಪಿ ಹಾಗೂ ವಿನ್ಯಾಸಕಾರ ೧೯೨೭ - ರಾಮ ನಾರಾಯಣ == ನಿಧನ == ೧೯೯೪ - ಜೈಲ್ ಸಿಂಗ್, ಭಾರತದ ರಾಷ್ಟ್ರಪತಿ. == ರಜೆಗಳು / ಆಚರಣೆಗಳು == ಕ್ರೈಸ್ತ ಧರ್ಮದಲ್ಲಿ ಕ್ರಿಸ್ಮಸ್. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ